ಬುಂದೇಲಖಂಡದ ಮತ್ತು ಮಾಳವಗಳ ಗಡಿಯಲ್ಲಿರುವ ನಗರ. ಸುಲ್ತಾನ್ ಮಹಮೂದ್ ಖಲ್ಜಿಯನ್ನು ಚಿತೋಡಿನ ರಾಣಾ ಸಂಗ ಸೋಲಿಸಿ ಈ ನಗರವನ್ನು ವಶಪಡಿಸಿಕೊಂಡ. ಮೊಗಲ ಸಾಮ್ರಾಟ ಬಾಬರನ ಆಳ್ವಿಕೆಗೆ ಔಧ್ ಒಂದನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳು ಸೇರಿಹೋದಾಗ ಸುಮಾರು 1527ರಲ್ಲಿ ಮೇದಿನಿರಾಯ್ ಎಂಬ ರಾಜಪುತ ಸರದಾರ ಚಂದೇರಿಯಲ್ಲಿ ತನ್ನ ಆಡಳಿತ ಸ್ಥಾಪಿಸಿದ. ಅನಂತರ ಪುರನಮಲ್ ಚಾಟ್ ಇದನ್ನು ತನ್ನ ವಶಪಡಿಸಿಕೊಂಡ. ಶೇರ್ಷಹ ಚಂದೇರಿಗೆ ಮುತ್ತಿದ. ಎಷ್ಟು ಕಾಲವಾದರೂ ನಗರದ ಕೋಟೆಯನ್ನು ವಶಪಡಿಸಕೊಳ್ಳಲಾರದೆ ಹೋದ. ಸಂಧಿ ಮಾಡಿಕೊಳ್ಳುವಂತೆ ಸುಳ್ಳು ಹೇಳಿ ಕೋಟೆಯಿಂದ ಪುರನಮಲ್ ಹೊರಗೆ ಬಂದಾಗ ವಂಚಿಸಿ, ಮತ್ತೆ ಯುದ್ಧ ಸಾರಿ ಕೋಟೆಯನ್ನು ವಶಪಡಿಸಿಕೊಂಡ.

24 ಜನ ತೀರ್ಥಂಕರ ಮೈಬಣ್ಣಕ್ಕನುಗುಣವಾದ ಶಿಲೆಯಿಂದ ಅವರ ಮೂರ್ತಿಗಳನ್ನು ಕಡೆದು ಸ್ಥಾಪಿಸಿರುವ ಜೈನಕ್ಷೇತ್ರವಾಗಿ ಚಂದೇರಿ ಇಂದಿಗೂ ಪ್ರಸಿದ್ಧವಾಗಿದೆ.	(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ